Home
ಸಂಕೇಶ್ವರ ಪಟ್ಟಣದ ಬಗ್ಗೆ :-
ಸಂಕೇಶ್ವರ ಪಟ್ಟಣವು ಹುಕ್ಕೇರಿ ತಾಲೂಕಿನಿಂದ 13 ಕಿ.ಮೀ.ನಷ್ಟು ದೂರದಲ್ಲಿದ್ದು, ಈ ಪಟ್ಟಣವು ಹಿರಣ್ಯಕೇಶಿ ನದಿಯ ದಡದಲ್ಲಿದ್ದು, ಪೂನಾ-ಬೆಂಗಳೂರ ರಾಷ್ಟ್ತ್ರೀಯ ಹೆದ್ದಾರಿ ನಂ.4ಕ್ಕೆ ಹೊಂದಿಕೊಂಡಿರುತ್ತದೆ. ಈ ಪುರಸಭೆಯು ಸನ್ 1973 ರಲ್ಲಿ ಪುರಸಭೆಯಾಗಿ ಸ್ಥಾಪನೆಯಾಗಿರುತ್ತದೆ. ಈ ಪಟ್ಟಣವು ಬೆಳಗಾವಿಯಿಂದ 50 ಕೀ.ಮೀ. ದೂರದಲ್ಲಿರುತ್ತದೆ. ಸಂಕೇಶ್ವರ ಪಟ್ಟಣಕ್ಕೆ ರಾಜಾಲಖಮಗೌಡಾ ಜಲಾಶಯ(ಹಿಡಕಲ್ ಡ್ಯಾಂ) ದಿಂದ ಹಾಗೂ ಹಿರಣ್ಯಕೇಶಿ ನದಿಯಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಈ ಪಟ್ಟಣದ ಜನಸಂಖ್ಯೆ 2011ರ ಜನಗಣತಿಯ ಪ್ರಕಾರ 34,445 ಇರುತ್ತದೆ. ಸಂಕೇಶ್ವರ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು, 23 ಚುನಾಯಿತ ಸದಸ್ಯರು ಹಾಗೂ 5 ನಾಮ ನಿರ್ದೇಶಿತ ಸದಸ್ಯರಿರುತ್ತಾರೆ. ಸಂಕೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಸುಪ್ರಸಿದ್ಧವಾದ ಶಂಕರಲಿಂಗ ದೇವಸ್ಥಾನ (ಶಂಕರಲಿಂಗ ಮಠ) ಇರುತ್ತದೆ. ಸಂಕೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಹಿರಣ್ಯಕೇಶಿ ಸಕ್ಕರೆ ಕಾರಖಾನೆ ಇರುತ್ತದೆ.
Brief About Sankeshwar TMC:-
The Town Municipal Council (TMC) Sankeshwar was constituted in 1973. It is situated along Pune - Bangalore National Highway No.4 at a distance of 50 Kms from Belgaum. It has a population of 34,445 as per census 2011. The TMC has 23 wards and equal number of councilors and 5 Numbers of Nominee Councilors. Sankeshwar TMC stretches to an area of 7.15 Sq Kms. The town has the famous Shankarling temple(Shankarling Math).There is a sugar factory called Hirankeshi in Sankeshwar
16-01-2012:- ಸಂಕೇಶ್ವರ ಪುರಸಭೆಯಲ್ಲಿ ಸನ್ 2011-12ನೇ ಸಾಲಿನ ಶೇ.22.75, ಶೇ.7.25 ಹಾಗೂ ಶೇ. 3 ಎಸ್.ಎಫ್.ಸಿ. ಹಾಗೂ ಪುರಸಭೆ ಅನುದಾನದಡಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಹಾಗೂ ಇತರ ಬಡ ಜನರಿಗೆ ಹಾಗೂ ಅಂಗವಿಕಲ ಫಲಾನುಭವಿಗಳಿಗೆ ವಿವಿಧ ಮಂಜೂರಾತಿ ಪತ್ರಗಳು ಹಾಗೂ ಸಲಕರಣೆ ಮತ್ತು ಚೆಕ್ಕ ವಿತರಣೆ ಕಾರ್ಯಾಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಶ್ರೀ. ಅಮರ ನಲವಡೆ, ಉಪಾದ್ಯಕ್ಷರಾದ ಶ್ರೀಮತಿ. ಬೇಬಿತಾಯಿ ದವಡತೆ, ಪುರಸಭೆ ಸದಸ್ಯರು, ಪುರಸಭೆ ಮುಖ್ಯಾದಿಕಾರಿಗಳಾದ ಶ್ರೀ. ಎಲ್ ಬಿ. ಹಿರೇಮಠ ಹಾಗೂ ಪುರಸಭೆ ಸರ್ವ ಸಿಬ್ಬಂದಿ ಹಾಜರಿದ್ದರು.


1)ಮಾನ್ಯ ಶ್ರೀ. ರಮೇಶ ವ್ಹಿ. ಕತ್ತಿ ಸಂಸದರು ಚಿಕ್ಕೋಡಿ ಇವರು ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವುದು.2) ಮಾನ್ಯ ಶ್ರೀ. ರಮೇಶ ವ್ಹಿ. ಕತ್ತಿ ಸಂಸದರು ಚಿಕ್ಕೋಡಿ ಹಾಗೂ ಶ್ರೀ. ಅಮರ ನಲವಡೆ ಪುರಸಭೆ ಅಧ್ಯಕ್ಷರು ಇವರು ಫಲಾನುಭವಿಗೆ ಕಂಪ್ಯೂಟರ್ ವಿತರಿಸುವ ದೃಶ್ಯ


3)ಮಾನ್ಯ ಶ್ರೀ. ರಮೇಶ ವ್ಹಿ. ಕತ್ತಿ ಸಂಸದರು ಚಿಕ್ಕೋಡಿ ಇವರು ಫಲಾನುಭವಿಗೆ ಚೆಕ್ ವಿತರಿಸುವ ದೃಶ್ಯ.4) ಮಾನ್ಯ ಶ್ರೀ. ರಮೇಶ ವ್ಹಿ. ಕತ್ತಿ ಸಂಸದರು ಚಿಕ್ಕೋಡಿ ಇವರು ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವುದು.
07-10-2011:- ಪುರಸಭೆ ಸಂಕೇಶ್ವರ ವ್ಯಾಪ್ತಿಯಲ್ಲಿ 40 ಮೈಕ್ರಾನಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬ್ಯಾಗ ಹಾಗೂ ಕೈಚೀಲಗಳನ್ನು ಮಾರುವುದು ಹಾಗೂ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿರಿ
ಆಧಾರ ಯೋಜನೆ:- ಪುರಸಭೆ ಸಂಕೇಶ್ವರ ವ್ಯಾಪ್ತಿಯಲ್ಲಿ ದಿನಾಂಕ: 26.09.2011 ರಿಂದ "ಆಧಾರ ಗುರುತಿನ ಚೀಟಿ" ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿರಿ
06-09-2011:- ಸಂಕೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಮಸ್ತ ನಾಗರಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ನೀರಿನ ಕರಗಳ ದರಗಳನ್ನು ಸರ್ಕಾರದ ಆದೇಶದ ಪ್ರಕಾರ ಪರೀಷ್ಕರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿರಿ
" This page is maintained by : Shri L.B. Hiremath Chief officer, TMC Sankeshwar - 9448859455 " Last Updated Date 28/01/2012

